Headlines

ಇನ್ನು ಕೂಡ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಬಂದಿಲ್ವ? ಸರ್ಕಾರದಿಂದ ಸಿಕ್ಕಿದೆ ಇದಕ್ಕೆ ಶಾಶ್ವತ ಪರಿಹಾರ!

Gruha lakshmi scheme Infoŗmation

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಗೃಹಲಕ್ಷ್ಮಿ ಯೋಜನೆಗೆ (Gruha lakshmi scheme) ಎಲ್ಲಾ ರೀತಿಯ ದಾಖಲೆಗಳನ್ನು ಸಲ್ಲಿಸಿದ್ದೇವೆ ಆದರೂ ಯಾಕೆ ಹಣ ಖಾತೆಗೆ ಬರುತ್ತಿಲ್ಲ ಎಂದು 10 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣ ಎಷೋ ಮಹಿಳೆಯರಿಗೆ ಕನಸಾಗಿಯೇ ಉಳಿದೆದೆ, ಅದೆಷ್ಟೋ ಪ್ರಯತ್ನ ಮಾಡಿದರು ಅವರ ಖಾತೆಗೆ ಹಣ ಮಾತ್ರ ವರ್ಗಾವಣೆ ಆಗುತ್ತಿಲ್ಲ.

Gruha lakshmi scheme Infoŗmation

ಕಾಂಗ್ರೆಸ್‌ ಸರ್ಕಾರ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಇದೂ ಒಂದು. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬ ಮಹಿಳ ಫಲಾನುಭವಿಗಳಿಗೆ ಪ್ರತಿ ತಿಂಗಳು ಉಚಿತ ಹಣ ವರ್ಗಾವಣೆ ಮಾಡಲಾಗುತ್ತದೆ. ಅದರಲ್ಲಿ ಈಗಾಗಲೆ ಎರಡು ಕಂತುಗಳು ಖಾತೆಗೆ ಜಮಾ ಆಗಿದೆ. ಮೊದಲನೇ ಕಂತಿನ ಹಣ 96 ಲಕ್ಷಕ್ಕೂ ಹೆಚ್ಚು ಮಹಿಳೆಯರ ಖಾತೆಗೆ ಬಂದಿಲ್ಲ. ಇದನ್ನು ಹಂತ ಹಂತವಾಗಿ ಜಮಾ ಮಾಡಲಾಗುತ್ತಿದೆ.

ಇನ್ನು ಹಣ ಬಾರದೆ ಇದ್ದರೆ ಅದಕ್ಕೆ ಕಾರಣ ಏನು?

ಈಗಾಗಲೇ ಸರ್ಕಾರ ತಿಳಿಸಿರುವ ಮಾಹಿತಿಯ ಪ್ರಕಾರ ಮಹಿಳೆಯರ ಖಾತೆಯಲ್ಲಿ ಸಮಸ್ಯೆ ಇದೆ. ಎಲ್ಲಾ ದಾಖಲೆಗಳನ್ನು ಸಲ್ಲಿಸಿದರು ಹಣ ಇನ್ನು ಜಮಾ ಆಗಿಲ್ಲ ಎಂದು ಮಹಿಳೆಯರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಬ್ಯಾಂಕಿನಲ್ಲಿ ಸಾಕಷ್ಟು ಮಹಿಳೆಯರು ekyc ಮಾಡಿಸಿಕೊಳ್ಳಲು ವಿಫಲರಾಗಿದ್ದಾರೆ. ಬ್ಯಾಂಕ್‌ ಖಾತೆ ekyc ಹಾಗೂ ಆದಾರ್‌ ಲಿಂಕ್‌ ಆಗದೆ ಇದ್ದರು ಸಹ ಖಾತೆಗೆ ಹಣ ಜಮಾ ಆಗಲ್ಲ.

ಆದ್ದರಿಂದ ಮಹಿಳೆಯರು ಕಡ್ಡಾಯವಾಗಿ ಈ ಒಂದು ಕೆಲಸ ಮಾಡಲೇ ಬೇಕು. ಬ್ಯಾಂಕ್‌ ಖಾತೆಯಲ್ಲಿ ಎಲ್ಲಾ ಲಿಂಕ್‌ಗಳು ಸರಿಯಾಗಿದ್ದರೆ ಮಾತ್ರ ಗೃಹಲಕ್ಷ್ಮಿ ಹಣ ಯಾವುದೇ ಸಮಸ್ಯೆ ಇಲ್ಲದೆ ಖಾತೆಗೆ ಜಮಾ ಆಗುತ್ತದೆ. ಇಲ್ಲ ಅಂದ್ರೆ ಹಣ ಜಮಾ ಆಗುವುದಿಲ್ಲ. ನಿಮ್ಮ ಖಾತೆಯಲ್ಲಿ ಏನಾದರು ಸಮಸ್ಯೆ ಇದ್ದು ಅದನ್ನು ಸರಿಮಾಡಿಸಿಕೊಂಡ ಮೇಲೆ ಎರಡು ಕಂತಿನ ಹಣವನ್ನು ಸೇರಿಸಿ ಜಮಾ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ.

ಇದನ್ನೂ ಸಹ ಓದಿ: ವಿಪಕ್ಷ ನಾಯಕನಿಲ್ಲದೇ ಅಧಿವೇಶನದಿಂದ ದೂರ ಉಳಿಯಲು ಬಿಜೆಪಿ ಶಾಸಕರ ನಿರ್ಧಾರ!

ಈ ಕೆಲಸ ಮಾಡಿ ಹಣ ಬಂದೇ ಬರುತ್ತೆ!

ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿದರು ಹಣ ಮಾತ್ರ ಬಾರದೆ ಇದ್ದ ಮಹಿಳೆಯರು ಅರ್ಜಿ ಸಲ್ಲಿಸಿದಾಗ ಕೊಟ್ಟಿರುವ ಸ್ವೀಕೃತಿ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಹಾಗೂ ಬ್ಯಾಂಕ್ ಖಾತೆಗಳ ವಿವರಗಳನ್ನು ನಿಮ್ಮ ಹತ್ತಿರದ ಅಧಿಕಾರಿಗಳ ಕಚೇರಿಗೆ ಬೇಟಿನೀಡಿ ಈ ಎಲ್ಲಾ ದಾಕಲೆಗಳನ್ನು ಕೊಟ್ಟರೆ ನಿಮ್ಮ ಖಾತೆಯಲ್ಲಿ ಏನೆಲ್ಲ ಸಮಸ್ಯೆ ಇದೆ ಎಂದು ಅವರು ನಿಮಗೆ ಮಾಹಿತಿಯನ್ನು ನೀಡುತ್ತಾರೆ, ಇದಕ್ಕೆ ಏನು ಮಾಡಬೇಕು ಎಂದು ಪರಿಹಾರವನ್ನು ಸಹ ನೀಡುತ್ತಾರೆ.

ಇದೇಲ್ಲ ನೀಡಿದರು ಕೂಡ ನಿಮ್ಮ ಖಾತೆಗೆ ಹಣ ಬಂದಿಲ್ಲ ಅಂತ ಚಿಂತೆ ಮಾಡುವುದು ಬೇಡ, ಏಕೆಂದರೆ ಸರ್ಕಾರ ಇದಕ್ಕೆ ಶಾಶ್ವತ ಪರಿಹಾರವನ್ನು ನೀಡಿದೆ. ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆಯಲು ಅವಕಾಶ ನೀಡಿದೆ. ಇದರಲ್ಲಿ ಖಾತೆ ತೆರೆಯುವುದರಿಂದ ಗೃಹಲಕ್ಷ್ಮಿ ಹಣ ಯಾವುದೇ ಸಮಸ್ಯೆ ಇಲ್ಲದೆ ಸುಲಭವಾಗಿ ನಿಮ್ಮ ಖಾತೆಗೆ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ.

ಆದ್ದರಿಂದ ಮಹಿಳೆಯರು ಆದಷ್ಟು ಬೇಗ ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆವುದು ಒಳ್ಳೆದು ಎಂದು ಸಚಿವೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಸಾಕಷ್ಟು ಮಹಿಳೆಯರು ಈ ಯೋಜನಯ ಲಾಭ ಪಡೆಯಲು ಸಾಧ್ಯವಾಗಿಲ್ಲ.

ಇತರೆ ವಿಷಯಗಳು:

ವಿದ್ಯಾರ್ಥಿಗಳಿಗೆ ನೆರವಾದ SBI: ಒಮ್ಮೆ ಅರ್ಜಿ ಸಲ್ಲಿಸಿದರೆ ಪ್ರತಿ ವರ್ಷ 10 ಸಾವಿರ ನೇರ ಖಾತೆಗೆ.!

SBI ಬ್ಯಾಂಕ್‌ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಗುಡ್‌ ನ್ಯೂಸ್:‌ 45 ಸಾವಿರ ಸಂಬಳದ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ

Leave a Reply

Your email address will not be published. Required fields are marked *